Friday 10 April 2020

ಹಿಂದೂ ಸಹೋದರನ ಪ್ರಶ್ನೆ

ಪ್ರಶ್ನೆ: ಮಹಮ್ಮದ್ ಅಲ್ಲಾಹನ ಪ್ರವಾದಿಗಳು.  ಅವರ ಒಡನಾಡಿಗಳು ಅವಿಶ್ವಾಸಿಗಳ ವಿರುದ್ಧ ಕಠಿಣರೂ,  ಒಬ್ಬರಿಗೊಬ್ಬರು ಕರುಣಾಮಯಿಗಳೂ ಆಗಿದ್ದಾರೆ...”(ಖುರಾನ್ 48:29)

ಖುರಾನಿನ ಈ ಸೂಕ್ತದ ಸನ್ನಿವೇಶವಾದರು ಏನು  [ಇದು ದ್ವೇಷವನ್ನು ಹರಡುತ್ತಿದೆಯೇ?] -ಈ ಕುರಿತು ಹಿಂದೂ ಸಹೋದರನು ತಿಳಿಯಲು ಬಯಸುತ್ತಾನೆ.

* ಒಂದು ಸಾಲಿನ ಉತ್ತರವೆಂದರೆ *: - ಪ್ರವಾದಿ ಹಾಗೂ ಅವರ ಅನುಯಾಯಿಗಳು ತಮ್ಮನ್ನು ಭಯಭೀತಿಗೊಳಿಸಿ ತಾಯ್ನಾಡಿನಿಂದ ಹೊರದೂಡಿದವರ ವಿರುದ್ಧ ಧೃಡ/ಕಠಿಣವಾಗಿರುವುದರ ಬಗ್ಗೆ  ಈ ಸೂಕ್ತ ತಿಳಿಸುತ್ತದೆ.

* ವಿವರಾತ್ಮಕ ಉತ್ತರಕ್ಕಾಗಿ, ದಯವಿಟ್ಟು ಕೆಳಗೆ ಓದಿ *

 ಕೆಲವು ಹೇಳಿಕೆಗಳನ್ನು ಸಂದರ್ಭ/ಸನ್ನಿವೇಶಕ್ಕೆ ಅನುಗುಣವಾಗಿ ಪ್ರಸ್ತುತಪಡಿಸದೆ ಋಣಾತ್ಮಕ ಚಿತ್ರಣವನ್ನು ಬಿಂಬಿಸುವ ಅಂಶವನ್ನು ಕೆಳಗೆ  ವಿವರಿಸಲಾಗಿದೆ.

ಉದಾಹರಣೆಗೆ: ಕರೋನಾ-ವೈರಸ್ ನ ಈ ಸಮಯದಲ್ಲಿ, ಮಿಸ್ಟರ್ 'X' ಮಿಸ್ಟರ್ 'Y' ಗೆ ಹೇಳಿದ, "ನೀವು ಹೊರಗೆ ಹೋಗುವುದನ್ನು ತಪ್ಪಿಸಿ,ನೀವು ಭೇಟಿಯಾಗುವ  ಪ್ರತಿಯೊಬ್ಬರಿಂದ 1 ಮೀಟರ್ ದೂರ ಕಾಯ್ದುಕೊಳ್ಳಿ ಮತ್ತು ಯಾರೊಂದಿಗೂ ಕೈಕುಲುಕಬೇಡಿ".

ಮಿಸ್ಟರ್‌ X ನ ಈ ಮಾತುಗಳು ನನಗೆ ಅರ್ಥವಾಗುತ್ತವೆ, ಏಕೆಂದರೆ ಕರೋನಾ-ವೈರಸ್ ಮಾರಿ ಹರಡುತ್ತಿರುವ ಅರಿವು ನನಗಿದೆ.ಇದು ಜೀವಕ್ಕೆ ಅಪಾಯಕಾರಿ.ಹೀಗಿರುವಾಗ ಜನರೊಂದಿಗಿನ ನಿಕಟ ಸಂಪರ್ಕಕವು ಕರೋನ-ವೈರಸ್ ಸೋಂಕು ಹಾಗೂ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು.

ಆದರೆ, ಯಾರಾದರೂ ಈ ಸಂದರ್ಭವನ್ನು ನಿರ್ಲಕ್ಷಿಸಿ - "ಮಿಸ್ಟರ್ X  ದ್ವೇಷ ಮತ್ತು ಕ್ರೌರ್ಯವನ್ನು ಹರಡುತ್ತಿದ್ದಾರೆ. ಜನರನ್ನು ಬಹಿಷ್ಕರಿಸುವಂತೆ, ಕೈಕುಲುಕದಂತೆ ಅವರು ಮಿಸ್ಟರ್ Yಗೆ  ಸಲಹೆ ನೀಡುತ್ತಿದ್ದಾರೆ " ಎಂದು ವಾದಿಸುವುದಾದರೆ, ಆ ವ್ಯಕ್ತಿ ಮಿಸ್ಟರ್ Xನ ಅಪಪ್ರಚಾರ ಮಾಡಿ ಋಣಾತ್ಮಕ ಚಿತ್ರಣವನ್ನು ಹರಡುತ್ತಿದ್ದಾನೆ ಎಂದಾಯಿತು. ಮಿಸ್ಟರ್ X ಅವರು ಮಿಸ್ಟರ್  Yಗೆ ಈ ಸಲಹೆಯನ್ನು ನೀಡಿದ ಆ ಸಂದರ್ಭವನ್ನು ಈ ವ್ಯಕ್ತಿ ನಿರ್ಲಕ್ಷಿಸುತ್ತಿದ್ದಾನೆ. ಈ ಸಲಹೆ-ಸೂಚನೆಗಳು ಪರಿಸ್ಥಿತಿಗೆ ಅನುಗುಣವಾದುದೇ ಹೊರತು ಜೀವನದಲ್ಲಿ ಅಳವಡಿಸಬೇಕಾದ ಸಾಮಾನ್ಯ ನಿಯಮವೇನಲ್ಲ.

ಅದೇ ರೀತಿ ಕುರಾನ್ ಪ್ರೀತಿ ಮತ್ತು ಬುದ್ಧಿವಂತಿಕೆಯನ್ನು ಜೀವನದಲ್ಲಿ ಸಾಮಾನ್ಯ ನಿಯಮವನ್ನಾಗಿ ಬಳಸುವಂತೆ ಸಲಹೆ  ನೀಡುತ್ತದೆ. ಆದಾಗ್ಯೂ, ಯುದ್ಧದ ಸಮಯಕ್ಕಾಗಿ ಮತ್ತೊಂದು ರೀತಿಯ ನಿಯಮಾವಳಿಗಳನ್ನು ಪ್ರಸ್ತಾಪಿಸುತ್ತದೆ. ನೀವು ಖುರಾನ್ ಅನ್ನು ಪ್ರಾರಂಭದಿಂದ( ಫತೇಹ್ ಅಧ್ಯಾಯ)  ಓದದ್ದೇ ಆದ್ದಲ್ಲಿ ಸೂಕ್ತಗಳ ಕುರಿತು ಉದ್ಭವವಾಗುವ ಪ್ರಶ್ನೆಗಳಿಗೆ ಸಂಪೂರ್ಣ ಚಿತ್ರಣ ಸಿಗುತ್ತದೆ.

1.ಮೆಕ್ಕಾದ ಜನರು ಮುಸ್ಲಿಮರನ್ನು ತಮ್ಮ ತಾಯ್ನಾಡಿನಿಂದ ಹೊರಹಾಕಿದ್ದರು. ಮುಸ್ಲಿಮರ  ಆಸ್ತಿ-ಪಾಸ್ತಿ, ಹಣ-ಸಂಪತ್ತನ್ನು ಈ ಜನರು ಕಸಿದುಕೊಂಡರು. ಮುಸ್ಲಿಮರನ್ನು ಕೊಲ್ಲುವುದರ ಜೊತೆಗೆ ಅವರನ್ನು ವಲಸಿಗರನ್ನಾಗಿ ಮಾಡಿದರು.

ಮುಸ್ಲಿಮರು ಮೆಕ್ಕಾಗೆ ಹಿಂತಿರುಗಲು ನಿರ್ಧರಿಸಿ ಬಂದಾಗ, ಆ ಪ್ರದೇಶದಲ್ಲಿ ನುಸುಳಲು ಸಹ ಅವರಿಗೆ ಅವಕಾಶ ನೀಡಲಿಲ್ಲ.ಈ ಸಂಧರ್ಭದಲ್ಲಿ ಮೆಕ್ಕನ್ನರ ಮತ್ತು ಮುಸ್ಲಿಮರ ನಡುವೆ ಒಪ್ಪಂದವಾಯಿತು.

2.ಈ ಅಧ್ಯಾಯದ ಸೂಕ್ತಗಳು ಮೇಲೆ ವಿವರಿಸಿದ ಸಂಧರ್ಭದಲ್ಲಿ ಬಹಿರಂಗವಾದವು/ನಿರೂಪಿತವಾದವು.

3.ಬಹುಮುಖ್ಯ ಭಾಗವೆಂದರೆ: * ಮುಸ್ಲಿಮರು ಮೆಕ್ಕನ್ನರಿಗಿಂತ ಬಲಶಾಲಿಗಳಾಗಿದ್ದರೂ, ಅವರು ಶಾಂತಿಗೆ ಅನುವು ನೀಡುವ ಉದ್ದೇಶದಿಂದ ಮೆಕ್ಕನ್ನರೊಂದಿಗೆ ಒಪ್ಪಂದ ಮಾಡಿಕೊಂಡರು *.

22ನೇ ಸೂಕ್ತದಿಂದ ಓದುವುದಾದರೆ

4.ಸೂಕ್ತ 22 ಹೇಳುತ್ತದೆ- "ಮತ್ತು ನಂಬಿಕೆಯಿಲ್ಲದವರು [ಮೆಕ್ಕನ್ನರು] ನಿಮ್ಮೊಂದಿಗೆ ಯುದ್ಧ ನೆಡೆಸುತ್ತಿದ್ದರೆ, ಅವರು ಬೆನ್ನು ತಿರುಗಿಸಿ ಓಡಿಹೋಗುತ್ತಿದರು"

5. 25ನೇ ಸೂಕ್ತವು  ಮೆಕ್ಕಾದ ಜನತೆ ಮುಸ್ಲಿಮರನ್ನು ಹರಮ್ ಮಸೀದಿಗೆ ಹೋಗದಂತೆ ತಡೆದದ್ದನ್ನು ವಿವರಿಸುತ್ತದೆ.

ಖುರಾನ್ ಮುಸ್ಲಿಮರ ವಿರುದ್ಧ ಹೊಡೆದಾಡಿ , ಅವರನ್ನು ನಾಡಿನಿಂದ ನಿಷ್ಕಾಶಗೊಳಿಸಿ, ಅವರ ಮೇಲೆ ಎಲ್ಲಾ ರೀತಿಯ ಭಯೋತ್ಪಾದಕ ಕೃತ್ಯಗಳನ್ನು ಬಿಚ್ಚಿಟ್ಟ ನಿರ್ದಿಷ್ಟ ಗುಂಪಿನ ಕುರಿತು ಮಾತನಾಡುತ್ತಿದೆ.  ಮುಸ್ಲಿಮರು  ವರ್ಷಾನುಗಟ್ಟಲೆ ತಾಳ್ಮೆಯಿಂದಿದ್ದು, ತಮ್ಮ ತಾಯ್ನಾಡಿಗೆ ಮರಳಲು ಅದೆಷ್ಟು ಬಯಸಿದ್ದರೂ ಸಹ ಮತ್ತೆ-ಮತ್ತೆ ಈ ಮೆಕ್ಕನ್ನರ ಗುಂಪು ಅವರನ್ನು ತಡೆದು ನಿಲ್ಲಿಸಿತ್ತು*.


ಆ ಮುಸ್ಲಿಮರ ನೋವು ಮತ್ತು ತಾಳ್ಮೆಯನ್ನು ನೀವು ಊಹಿಸಬಲ್ಲಿರಾ?

ಈ ರೀತಿಯ ಜನರ ಕುರಿತಾಗಿ, 29ನೇಯ ಸೂಕ್ತವು  ಪ್ರವಾದಿ ಮತ್ತು ವಿಶ್ವಾಸಿಗಳು ಇಂತಹ ಜನರ ವಿರುದ್ಧ [ ಯುದ್ಧದಲ್ಲಿದ್ದ ಮೆಕ್ಕನ್ನರು]  ದೃಢರಾಗಿದ್ದಾರೆಂದು  ಹೇಳುತ್ತದೆ.

ಇದನ್ನು ಅರಿಯಲು ಕಠಿಣವಿರುವುದಾದರು ಏನು?

ಒಂದು ದೇಶದ ಸೈನ್ಯವು ತಾನು ಹೊರಹಾಕಲ್ಪಟ್ಟ ಭೂಮಿಯನ್ನು  ಮರುಪಡೆಯಲು ಹೋದಾಗ ಮಾಡುವುದಾದರೂ ಏನು?

ಲೇಖನದ ಮೂಲ:
https://khurshidimam.blogspot.com/2020/04/strong-against-kaafir-quran-4829-what.html

ಪ್ರವಾದಿ ಯೂನಸರ ಕಥೆಯಿಂದ 4 ಪಾಠಗಳು

 ಪ್ರವಾದಿ ಯೂನಸರ ಕಥೆಯಿಂದ 4 ಪಾಠಗಳು 1. ನಮ್ಮ ಪಾಪವನ್ನು ಗುರುತಿಸಿ ಕ್ಷಮೆ ಹುಡುಕುವುದು. ಮೀನು ಸಮುದ್ರದ ಆಳಕ್ಕೆ ಇಳಿದಾಗ ಪ್ರವಾದಿ ಯೂನಸ್ ತನ್ನ ತಪ್ಪನ್ನು ಅರಿತುಕೊಂಡ...