Thursday 21 May 2020

ಸನಾತನ ಧರ್ಮ ಮತ್ತು ಹಲಾಲ್ ಆಹಾರವನ್ನು ತಿನ್ನುವ ಆಜ್ಞೆ

ಸನಾತನ ಧರ್ಮದಲ್ಲಿ ಹಲಾಲ್ ಆಹಾರ

ಖುರ್ಷಿದ್ ಇಮಾಮ್
*******************************

ಅರೇಬಿಕ್ ಪದ 'ಹಲಾಲ್' ಎಂದರೆ ಅನುಮತಿಸಲಾದ.

ಕುರಾನ್ ಈ ಪದವನ್ನು ಭಿನ್ನ ಸನ್ನಿವೇಶಗಳಲ್ಲಿ ಬಳಸುತ್ತದೆ. ಅಂತಹ ಒಂದು ಸಂದರ್ಭವೆಂದರೆ: ಆಹಾರ.

ದೇವರು ಇಡೀ ವಿಶ್ವವನ್ನು ಮಾನವಕುಲದ ಹಿತಕ್ಕಾಗಿ ಸೃಷ್ಟಿಸಿದ್ದಾನೆ. ಪ್ರಾಣಿ ಮತ್ತು ಸಸ್ಯ ಸಂಕುಲವು ಸಹ ನಮ್ಮ ಸೇವೆಯಲ್ಲಿದೆ. ಕೆಲವು ಪ್ರಾಣಿಗಳನ್ನು  ಆಹಾರವನ್ನಾಗಿ ತಿನ್ನಲು ದೇವರಿಂದ ಅನುಮತಿ ದೊರೆತಿದೆ. ಆಹಾರವನ್ನು ತಿನ್ನುವ ಈ ಅನುಮತಿ ಇಸ್ಲಾಮಿಕ್ ಮತ್ತು ಹಿಂದೂ ಧಾರ್ಮಿಕ ಗ್ರಂಥಗಳೆರಡರಲ್ಲೂ ಇದೆ.

 ಹಿಂಸಾತ್ಮಕವಾಗಿ ಪ್ರಾಣಿಗಳನ್ನು ಕೊಲ್ಲುವುದನ್ನು ನಿಷೇಧಿಸಲಾಗಿದೆ. ಆದರೆ ಆಹಾರವಾಗಿ ಸೇವಿಸಲು, ದೇವರ ಅನುಮತಿ ಇದೆ. ಆದ್ದರಿಂದ, ಈ ಪ್ರಾಣಿಗಳನ್ನು ವಧಿಸುವಾಗ ನಾವು ದೇವರ ಹೆಸರನ್ನು ತೆಗೆದುಕೊಳ್ಳುತ್ತೇವೆ. ಇಲ್ಲದಿದ್ದರೆ ಜೀವವನ್ನು ತೆಗೆಯುವುದು ನಮ್ಮ ಕೈಯಲ್ಲಿದೆ ಎಂದು ನಾವು ಭಾವಿಸುತ್ತೇವೆ.

ಜೀವವನ್ನು ತೆಗೆಯುವುದು ಖಂಡಿತವಾಗಿಯೂ ತಪ್ಪಾಗಿದ್ದರೂ, ದೇವರ ಅನುಮತಿಯಿಂದ ಅದನ್ನು ಕೇವಲ ಆಹಾರ ರೂಪದಲ್ಲಿ ಸೇವಿಸುವ ಉದ್ದೇಶದಿಂದ ನಾವು ಈ ಜೀವವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು  ನೆನಪಿಸಿಕೊಳ್ಳುತ್ತೇವೆ. ನಿಜಕ್ಕೂ ದೇವರು ಎಲ್ಲಾ ಜೀವಿಗಳ ಮೇಲೆ ಶಕ್ತಿಯುಳ್ಳವನಾಗಿದ್ದು ,ಈ ಪ್ರಾಣಿಗಳ ಮೇಲೆ ನಮಗೇನೂ ಅಧಿಕಾರವಿಲ್ಲ. ಈ "ಅವಕಾಶ"ಅಥವಾ ಅನುಮತಿಸುವಿಕೆಯನ್ನೇ ಅರೇಬಿಕ್ ಭಾಷೆಯಲ್ಲಿ ಹಲಾಲ್ ಎಂದು ಕರೆಯಲಾಗುತ್ತದೆ.

ನೀವು ಹಿಂದೂ ಧರ್ಮಗ್ರಂಥಗಳನ್ನು ಓದಿದರೆ, ಹಲವಾರು ಸ್ಥಳಗಳಲ್ಲಿ ಮಾಂಸವನ್ನು ತಿನ್ನುವ ಆಜ್ಞೆ ಇದೆ.

ಶ್ರೀ ರಾಮಚಂದ್ರರು ಕೂಡ ಮಾಂಸ ತಿನ್ನುತ್ತಿದ್ದರು.

 ಭಾರತೀಯ ಶ್ರೇಷ್ಠ ವ್ಯಕ್ತಿ- ಸ್ವಾಮಿ ವಿವೇಕಾನಂದರು- ಹಿಂದೂ ಸಹೋದರರಿಗೆ ಮಾಂಸ ತಿನ್ನುವ ಅಗತ್ಯವನ್ನು ಒತ್ತಿ ಹೇಳಿದರು.

"ಹಳೆಯ ವಿಧ್ಯುಕ್ತಗಳ ಪ್ರಕಾರ,  ಗೋಮಾಂಸವನ್ನು ತಿನ್ನದವನು ಉತ್ತಮ ಹಿಂದೂ ಅಲ್ಲ ಎಂದು ನಾನು ನಿಮಗೆ ಹೇಳಿದರೆ ನೀವು ಆಶ್ಚರ್ಯಚಕಿತರಾಗುವಿರಿ. ಕೆಲವು ಸಂದರ್ಭಗಳಲ್ಲಿ ಓರ್ವನು ಗೂಳಿಯನ್ನು ಬಲಿ ಕೊಟ್ಟು ತಿನ್ನಬೇಕು."
[ಸ್ವಾಮಿ ವಿವೇಕಾನಂದರ ಸಂಪೂರ್ಣ ಕೃತಿಗಳು, ಸಂಪುಟ 3, ಪುಟ 536]

"ನಮ್ಮ ಭಾರತದಲ್ಲೇ ಒಂದು ಸಮಯವಿತ್ತು ಗೋಮಾಂಸವನ್ನು ತಿನ್ನದೇ, ಯಾವ ಬ್ರಾಹ್ಮಣನು ಬ್ರಾಹ್ಮಣನಾಗಿ ಉಳಿಯಲು ಸಾಧ್ಯವಿರಲಿಲ್ಲ;" [ಪುಟ 174]

ಇವು ಪ್ರಸಿದ್ಧ ವಿಷಯಗಳು. ಆಶ್ಚರ್ಯಕರ ಸಂಗತಿಯೆಂದರೆ, ಸನಾತನ ಧರ್ಮವು ಸಹ ಹಲಾಲ್ ಆಹಾರವನ್ನು ತಿನ್ನಲು ಆಜ್ಞಾಪಿಸುತ್ತದೆ.  ನಿಗದಿತ ವಿಧಾನವನ್ನು ಅನುಸರಿಸದೇ ಮಾಂಸ ತಿನ್ನುವುದನ್ನು ಹಿಂದೂ ಧರ್ಮದಲ್ಲಿ ನಿಷೇಧಿಸಲಾಗಿದೆ.

ಹಿಂದೂ ಧರ್ಮಗ್ರಂಥದಲ್ಲಿ ಪ್ರಾಣಿ ವಧೆಗಾಗಿ ಎರಡು ಷರತ್ತುಗಳನ್ನು ಹಾಕಲಾಯಿತು.
1. ದೇವರ  ಅನುಮತಿಯೊಂದಿಗೆ ವಧೆ ಮಾಡಲಾಗುತ್ತಿದೆ ಎಂಬುದನ್ನು ನೆನಪಿನಲ್ಲಿಡುವ ಸಲುವಾಗಿ  ವಧೆಯ ಸಮಯದಲ್ಲಿ ದೇವರ ಹೆಸರನ್ನು ತೆಗೆದುಕೊಳ್ಳಬೇಕು
2. ದೇವರು ಕೊಟ್ಟ ವಿಧಾನವನ್ನು ಅನುಸರಿಸಬೇಕು. ಇಲ್ಲದಿದ್ದರೆ, ಇದನ್ನು ಕೊಲೆ ಎಂದು ಪರಿಗಣಿಸಲಾಗುವುದು.

ಮಂತ್ರಗಳನ್ನು ಪಠಿಸುವುದರಿಂದ ಮಾಂಸವನ್ನು ಪವಿತ್ರ ಅಥವಾ ಶುದ್ಧಗೊಳಿಸಲಾಗುತ್ತದೆ.




ಮನುಸ್ಮೃತಿಯ ಈ  ಮೇಲಿನ ಪದ್ಯಗಳು ಪ್ರಾಣಿಗಳನ್ನು ದೈವಿಕ ಕಾನೂನಿನ ಪ್ರಕಾರ ವಧಿಸುವ ಮತ್ತು ದೈವಿಕ ಮಂತ್ರವನ್ನು ಪಠಿಸುವ ಬಗ್ಗೆ ಸ್ಪಷ್ಟನೆ ನೀಡುತ್ತವೆ.

ನಮ್ಮನ್ನು ಮತ್ತು ಪ್ರಾಣಿಗಳನ್ನು ಸೃಷ್ಟಿಸಿದ ದೇವರು,ಅವುಗಳಲ್ಲಿ ಕೆಲವನ್ನು ನಮ್ಮ ಆಹಾರವಾಗಿ ಬಳಸಲು ನಮಗೆ ಅವಕಾಶ ಮಾಡಿಕೊಟ್ಟಿದ್ದಾನೆ.

ಸಜೀವಿಗಳನ್ನು ಸೇವಿಸದೆ ಮನುಷ್ಯ ಬದುಕಲು ಸಾಧ್ಯವಿಲ್ಲ. ಪ್ರತಿಯೊಬ್ಬ ಮನುಷ್ಯ - ಸಸ್ಯಾಹಾರಿ ಅಥವಾ  ಮಾಂಸಾಹಾರಿ ಆಗಲಿ - ಇತರ ಜೀವಿಗಳನ್ನು ತಿನ್ನುವುದರ ಮೂಲಕವೇ ಬದುಕುಳಿಯುತ್ತಾನೆ.

English Source: https://khurshidimam.blogspot.com/2020/05/halal-food-in-sanatan-dharm.html

No comments:

Post a Comment

ಪ್ರವಾದಿ ಯೂನಸರ ಕಥೆಯಿಂದ 4 ಪಾಠಗಳು

 ಪ್ರವಾದಿ ಯೂನಸರ ಕಥೆಯಿಂದ 4 ಪಾಠಗಳು 1. ನಮ್ಮ ಪಾಪವನ್ನು ಗುರುತಿಸಿ ಕ್ಷಮೆ ಹುಡುಕುವುದು. ಮೀನು ಸಮುದ್ರದ ಆಳಕ್ಕೆ ಇಳಿದಾಗ ಪ್ರವಾದಿ ಯೂನಸ್ ತನ್ನ ತಪ್ಪನ್ನು ಅರಿತುಕೊಂಡ...