Sunday 21 June 2020

ಸೂರ್ಯ ಮತ್ತು ಚಂದ್ರ ಪ್ರಯೋಜನಕಾರಿಯಾದ ಕಾರಣ ನಾವು ಅವುಗಳನ್ನು ಪೂಜಿಸಬಹುದೇ?

 ಸೂರ್ಯ ಮತ್ತು ಚಂದ್ರ ಪ್ರಯೋಜನಕಾರಿಯಾದ ಕಾರಣ ನಾವು ಅವುಗಳನ್ನು ಪೂಜಿಸಬಹುದೇ?

----------------------------------------

 ಸನ್ನಿವೇಶಕ್ಕೆ ಅನುಗುಣವಾಗಿ ಪ್ರತಿಕ್ರಯಿಸಲು ಭಿನ್ನ ಪದಗಳು ಹಾಗೆಯೇ ವಿಭಿನ್ನ ನಡವಳಿಕೆಗಳಿವೆ.

ಗೌರವ, ಪ್ರೀತಿ, ವಾತ್ಸಲ್ಯ, ಸಲ್ಲಿಕೆ, ಹೊಗಳಿಕೆ, ಮೆಚ್ಚುಗೆ - ಈ ಪದಪುಂಜಗಳು ಸನ್ನಿವೇಶಕ್ಕೆ ತಕ್ಕಂತೆ ಬಳಕೆಯಾಗುವವು.

ನೀವು ಪೋಷಕರನ್ನು ಗೌರವಿಸಿ ಪ್ರೀತಿಸುತ್ತೀರಿ.

ನೀವು ಮೆಚ್ಚುಗೆಯಿಂದ ಕ್ರಿಕೆಟಿಗನ ಆಟ ಅಥವಾ ಓರ್ವನ ಧೈರ್ಯವನ್ನು ಪ್ರಶಂಸಿಸಬಹುದು. ಆದರೆ ಅವರು ನಿಮ್ಮ ಪೋಷಕರನ್ನು ಬದಲಿಸಲು ಸಾಧ್ಯವಿಲ್ಲ. ನಿಮ್ಮ ಹೆತ್ತವರನ್ನು ನೀವು ಪ್ರೀತಿಸುವ ರೀತಿಯಲ್ಲಿ ನೀವು ಅವರನ್ನು ಪ್ರೀತಿಸಲು ಸಾಧ್ಯವಿಲ್ಲ.

ನೀವು ನಿಮ್ಮ ಸಂಗಾತಿಯನ್ನು ಪ್ರೀತಿಸುತ್ತೀರಿ ಆದರೆ ಆ ಪ್ರೀತಿಯು ನಿಮ್ಮ ನೆರೆಹೊರೆಯವರನ್ನು ಪ್ರೀತಿಸುವ ರೀತಿಯದ್ದಲ್ಲ.

ನೀವು ದೇವರಿಗೆ ಶರಣಾಗಿರುವಿರಿ, ಆದ ಕಾರಣ ಇಡೀ ಜೀವನ ದೇವರ ಮಾರ್ಗದರ್ಶನದಂತೆ ನಡೆಸಬೇಕು.

ದೇವರು ಯಾರಿಂದಲೂ ಬದಲಾಗಲಾರ.

ನೀವು ಪ್ರಾಣಿಗಳನ್ನು ಪ್ರೀತಿಸುವಿರಿ, ಈ ಪ್ರೀತಿಯು ನಿಮ್ಮ ಮಗುವಿಗೆ ತೋರುವ ಪ್ರೀತಿಗೆ ಸಮವಲ್ಲ.

ನೀವು ಹೂವು ಪಕ್ಷಿಗಳ, ಆಕಾಶ ಸಾಗರಗಳು, ಸೂರ್ಯ-ಚಂದ್ರ ಪರ್ವತ ಇತ್ಯಾದಿಗಳ ಸೌಂದರ್ಯವನ್ನು ಹಾಡಿ ಹೊಗಳುವಿರಿ  ಇವೆಲ್ಲವು ನಾವು ದೇವರೆಂದು ನಂಬುವ ಒಬ್ಬ ಶ್ರೇಷ್ಠ ಶೃಷ್ಟಿಕರ್ತನ ಇರುವಿಕೆಯನ್ನು ದೃಷ್ಟಾಂತಿಸುತ್ತವೆ.

ಸುತ್ತುವ ಮತ್ತು ತಿರುಗುವ ಗ್ರಹಗಳು, ಗೆಲಾಕ್ಸಿಗಳು ಮತ್ತು ದೈತ್ಯಾಕಾರದ ಬ್ರಹ್ಮಾಂಡವು ನಮ್ಮ ಸೃಷ್ಟಿಕರ್ತನ ಶ್ರೇಷ್ಠತೆಯನ್ನು ವ್ಯಕ್ತಪಡಿಸುತ್ತದೆ.
ಹಾಗಾದರೆ - ಯಾರು ನೈಜ ಮೆಚ್ಚುಗೆ ಮತ್ತು ಪೂಜೆಗೆ ಅರ್ಹರು?
ಖಂಡಿತವಾಗಿಯೂ ಸೂರ್ಯ, ಚಂದ್ರ, ನಕ್ಷತ್ರಗಳೆಲ್ಲವೂ ಸೃಷ್ಟಿಗಳಾಗಿವೆ ಆದರೆ ಅವುಗಳ ಸೃಷ್ಟಿಕರ್ತನೇ ನಮ್ಮ ಸೃಷ್ಟಿಕರ್ತನಾಗಿದ್ದಾನೆ.

ನಾವು ದೇವರನ್ನು ಆರಾಧಿಸಬೇಕು ಮತ್ತು ಅವನನ್ನು ಅತಿಯಾಗಿ ಪ್ರೀತಿಸಬೇಕು ಏಕೆಂದರೆ, ಅವನೇ ನಮಗೆ ತಾಯಿ, ತಂದೆ, ಸಂಗಾತಿಯನ್ನು ನೀಡಿದವ ಹಾಗೆಯೇ, ನಾವು ಜೀವಿಸುವ ಪರಿಸರದಲ್ಲಿ ಹೂವು-ಹಣ್ಣು, ಪ್ರಾಣಿ-ಪಕ್ಷಿ, ಸೂರ್ಯ-ಚಂದ್ರ, ನಕ್ಷತ್ರ ಇತ್ಯಾದಿಗಳನ್ನು ಇರಿಸಿದವ.

ನಾವು ತೆಗೆದುಕೊಳ್ಳುವ ಪ್ರತಿಯೊಂದು ಉಸಿರು ದೇವರಿಂದಲೇ..ನೀವು
ನಿಮ್ಮ ಪೋಷಕರನ್ನು ಮತ್ತು ನಿಮ್ಮಸುತ್ತಲು ಕಾಣಸಿಗುವ ಪರಿಸರವನ್ನು ಮೆಚ್ಚುವಾಗ ಇವೆಲ್ಲವನ್ನು ಸೃಷ್ಟಿಸಿದ ಮತ್ತು ನಮ್ಮೆಲ್ಲರ ಸಂತೋಷಗಳಿಗೆ ನೈಜ ಕಾರಣವಾದ  "ನಮ್ಮ ಪ್ರಭು" ವನ್ನು ಒಪ್ಪದಿರುವುದು ನ್ಯಾಯಸಮ್ಮತವಲ್ಲ.

ಸಮತೋಲನ ಕ್ರಿಯೆಯೆಂದರೆ  ಸೂರ್ಯ-ಚಂದ್ರ, ಹೂವು-ಹಣ್ಣು ಹೀಗೆ ಮಿಕ್ಕೆಲ್ಲಾ ಸೃಷ್ಟಿಗಳನ್ನು ಮೆಚ್ಚುವುದು, ಆದರೆ ಏಕೈಕ ಶೃಷ್ಟಿಕರ್ತ ಸರ್ವಶಕ್ತ ದೇವರನ್ನು ಮಾತ್ರ ಆರಾಧಿಸುವುದು.

No comments:

Post a Comment

ಪ್ರವಾದಿ ಯೂನಸರ ಕಥೆಯಿಂದ 4 ಪಾಠಗಳು

 ಪ್ರವಾದಿ ಯೂನಸರ ಕಥೆಯಿಂದ 4 ಪಾಠಗಳು 1. ನಮ್ಮ ಪಾಪವನ್ನು ಗುರುತಿಸಿ ಕ್ಷಮೆ ಹುಡುಕುವುದು. ಮೀನು ಸಮುದ್ರದ ಆಳಕ್ಕೆ ಇಳಿದಾಗ ಪ್ರವಾದಿ ಯೂನಸ್ ತನ್ನ ತಪ್ಪನ್ನು ಅರಿತುಕೊಂಡ...