Saturday 27 June 2020

ನಾನು ವಿಜ್ಞಾನವನ್ನು ನಂಬುತ್ತೇನೆ. ನನಗೆ ಧರ್ಮ ಅಥವಾ ದೇವರು ಏಕೆ ಬೇಕು?

ನಾನು ವಿಜ್ಞಾನವನ್ನು ನಂಬುತ್ತೇನೆ. ನನಗೆ ಧರ್ಮ ಅಥವಾ ದೇವರು ಏಕೆ ಬೇಕು? 
***************** ****

ವಿಜ್ಞಾನವು ದೇವರ ನಿಯಮಗಳ ಆವಿಷ್ಕಾರಗಳೊಂದಿಗೆ ವ್ಯವಹರಿಸುತ್ತದೆ. ಅದಕ್ಕೆ ತಕ್ಕಂತೆಯೇ ಪ್ರಕೃತಿಯ ನಿಯಮಗಳು  ಬದಲಾಗುವುದಿಲ್ಲ. ಈ ಕಾನೂನುಗಳ ಬಗ್ಗೆ ನಾವು ಎಷ್ಟು ಆಲೋಚಿಸುವೆವೋ  ಮಾನವಕುಲಕ್ಕೆ ಅಷ್ಟೇ  ಉತ್ತಮ ವಿಷಯಗಳನ್ನು ತರಬಹುದು.

ನಮ್ಮ ದಿನನಿತ್ಯದ ಜೀವನದಲ್ಲಿ ವಿಜ್ಞಾನವು ಅಪಾರವಾದ ಸಹಾಯ ಮಾಡುತ್ತದೆ. ನಮ್ಮ ಅಲಾರಾಂ ಗಡಿಯಾರದಿಂದ  ಹಿಡಿದು  ಔಷಧಿಗಳವರೆಗೆ - ಎಲ್ಲವೂ ವಿಜ್ಞಾನದ ವ್ಯಾಪ್ತಿಗೆ ಬರುತ್ತವೆ.

ಆದರೆ, ವಿಜ್ಞಾನವು ತನ್ನದೇ ಆದ ಮಿತಿಗಳನ್ನು ಹೊಂದಿದೆ. ಜೀವನದ ಪ್ರತಿಯೊಂದು ವಿಷಯದಲ್ಲೂ ವಿಜ್ಞಾನವು ನಮಗೆ ಮಾರ್ಗದರ್ಶನ ನೀಡುತ್ತದೆ ಎಂದು ನಿರೀಕ್ಷಿಸುವುದು ಅನ್ಯಾಯವೇ ಸರಿ.

ವಿಜ್ಞಾನದ ಸ್ವರೂಪವು ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ನಮ್ಮನ್ನು ಉತ್ತಮ ಮನುಷ್ಯನನ್ನಾಗಿ ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ, ವಿಜ್ಞಾನವು ನೈತಿಕ ಮೌಲ್ಯಗಳು, ನೀತಿಶಾಸ್ತ್ರ ಅಥವಾ ಸಾಮಾಜಿಕ ನಡವಳಿಕೆಯ ಬಗ್ಗೆ ಮಾತನಾಡುವುದಿಲ್ಲ. ಇದು ತಮ್ಮ ಪೋಷಕರಿಗೆ ಕೃತಜ್ಞತೆ ತೋರುವ, ತನ್ನ ಸಂಗಾತಿಯನ್ನು ಪ್ರೀತಿಸುವ, ತನ್ನ ಮಕ್ಕಳನ್ನು ಆರೈಕೆ ಮಾಡುವ ಅಥವಾ ಅಗತ್ಯವಿರುವವರಿಗೆ ಸಹಾಯ ಮಾಡುವ ಬಗ್ಗೆ ಮಾತನಾಡುವುದಿಲ್ಲ.

ಹಾಗೆಯೇ, ವಿಜ್ಞಾನವು ಓರ್ವನ ಆತ್ಮಸಾಕ್ಷಿಗೆ ಮನವಿ ಮಾಡುವುದಿಲ್ಲ ಮತ್ತು ಇತರರಿಗೆ ಹಾನಿಯಾಗದಂತೆ ತಡೆಯುವುದಿಲ್ಲ.

ಅತ್ಯಾಧುನಿಕ ವಿಜ್ಞಾನ ಪ್ರಯೋಗಾಲಯವು ತಕ್ಕ ಮಾನವ ಸಂಪನ್ಮೂಲ ನೀತಿಯನ್ನು ಹೊಂದಿರಬಹುದು, ಉದಾಹರಣೆಗೆ 'ಲೈಂಗಿಕ ಕಿರುಕುಳ ತಡೆಗಟ್ಟುವಿಕೆ'. ಆದರೆ
 ನೈತಿಕವಾಗಿ ಸರಿಯಾದ ಲೈಂಗಿಕ ನಡವಳಿಕೆ ಏನೆಂದು ವಿಜ್ಞಾನ ನಮಗೆ ಕಲಿಸದು!

ನಮ್ಮ ದಿನನಿತ್ಯದ ಜೀವನದಲ್ಲಿ ವಿಜ್ಞಾನವು  ಅತ್ಯಗತ್ಯವಿದ್ದರೂ, ಇದು ನಮ್ಮ ಅಸ್ತಿತ್ವದ ಕುರಿತು ವಿಶಾಲ ದೃಷ್ಟಿಕೋನವನ್ನು ಒಳಗೊಂಡಿರುವುದಿಲ್ಲ:

1. ನಮ್ಮ ಜೀವನದ ಉದ್ದೇಶವೇನು?

2. ಯಾವ ಕಾರ್ಯಗಳು ಪ್ರಯೋಜನಕಾರಿ ಮತ್ತು ಯಾವುದು ಹಾನಿಕಾರಕ?

3. ಬಡತನ, ಮಾದಕ ವ್ಯಸನ, ಅತ್ಯಾಚಾರ, ದರೋಡೆ, ಕೊಲೆ ಇತ್ಯಾದಿಗಳನ್ನು ತೊರೆದುಹಾಕಲು ಯಾವ ಕಾನೂನುಗಳನ್ನು ಜಾರಿಗೆ ತರಬೇಕು?

4. ಜೀವನದಲ್ಲಿ ಮತ್ತು ಸಮಾಜದಲ್ಲಿ 'ಶಾಂತಿ' ಹೇಗೆ ಸಾಧಿಸುವುದು?

ಈ ಸಂಬಂಧಿತ ಪ್ರಶ್ನೆಗಳಿಗೆ ವಿಜ್ಞಾನ ಉತ್ತರಿಸುವುದಿಲ್ಲ.

ಆದ್ದರಿಂದ, ನಮಗೆ ಜ್ಞಾನದ ಅಡಿಪಾಯವಾಗಿ  ವಿಜ್ಞಾನದ ಸ್ವತ್ತಿಗಿಂತ ಮಿಗಿಲಾದ ಒಂದು ಘಟಕದ ಅವಶ್ಯಕತೆ ಇದೆ. ಅದುವೇ 'ಸರ್ವಶಕ್ತ ದೇವರ ಮಾರ್ಗದರ್ಶನ'.

ಮಾನವಕುಲವನ್ನು ಸೃಷ್ಟಿಸಿದ ಆ ಸೃಷ್ಟಿಕರ್ತನಿಂದ ನಮಗೆಲ್ಲರಿಗೂ ಮಾರ್ಗದರ್ಶನ ಬೇಕಿದೆ.   ಇಡೀ ಮಾನವೀಯತೆಗೆ ಒಳ್ಳೆಯದ್ದು- ಕೆಟ್ಟದ್ದಾವುದೆಂದು ಚೆನ್ನಾಗಿ ತಿಳಿದಿರುವವನಿಂದ,  ನಿಷ್ಪಕ್ಷಪಾತ ಮಾರ್ಗದರ್ಶನ ಬೇಕು.

ದೇವರ ಮಾರ್ಗದರ್ಶನವನ್ನು ಅನುಸರಿಸುವುದನ್ನು ದೇವರ ಧರ್ಮ ಎಂದು ಕರೆಯಲಾಗುತ್ತದೆ.

ಮತ್ತು ಈ ಮಾರ್ಗದರ್ಶನವು ದೇವರು ರಚಿಸಿದ ಕಾನೂನುಗಳು ಮತ್ತು ವಿಷಯಗಳ ಬಗ್ಗೆ ವಿಚಾರಮಾಡಲು ಮತ್ತು ಅವುಗಳನ್ನು ತನ್ನ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಬಳಸಲು ಹೇಳುತ್ತದೆ.

No comments:

Post a Comment

ಪ್ರವಾದಿ ಯೂನಸರ ಕಥೆಯಿಂದ 4 ಪಾಠಗಳು

 ಪ್ರವಾದಿ ಯೂನಸರ ಕಥೆಯಿಂದ 4 ಪಾಠಗಳು 1. ನಮ್ಮ ಪಾಪವನ್ನು ಗುರುತಿಸಿ ಕ್ಷಮೆ ಹುಡುಕುವುದು. ಮೀನು ಸಮುದ್ರದ ಆಳಕ್ಕೆ ಇಳಿದಾಗ ಪ್ರವಾದಿ ಯೂನಸ್ ತನ್ನ ತಪ್ಪನ್ನು ಅರಿತುಕೊಂಡ...