Sunday 12 July 2020

ಪರಲೋಕದ ಜೀವನವಿಲ್ಲದೆ ಮಾನವೀಯತೆ ಇರಬಹುದೇ?

ಪರಲೋಕದ ಜೀವನವಿಲ್ಲದೆ ಮಾನವೀಯತೆ ಇರಬಹುದೇ?
'ವಾಸ್ತವಿಕವಾಗಿ, ನಾನು ಮಾನವೀಯತೆಯನ್ನು ನಂಬಿದ್ದೇನೆ ಹೊರತು ಧರ್ಮವನ್ನಲ್ಲ'

***************** ******


ಎ. ಮಾನವೀಯತೆ - ಪರಲೋಕದ [parlok] ನಂಬಿಕೆಯಿಲ್ಲದೆ?


'ನಾನು ಮಾನವೀಯತೆಯ ಧರ್ಮವನ್ನು ನಂಬುತ್ತೇನೆ'.


'ಮೊದಲು ಒಳ್ಳೆಯ ಮಾನವನಗು ತದನಂತರ ......'


'ಸ್ವರ್ಗ / ನರಕವನ್ನು ಯಾರು ಕಂಡಿದ್ದಾರೆ? ಹಾಗಾದರೆ ನಾವು ಅದನ್ನು ಏಕೆ ನಂಬಬೇಕು? '


ಆಗಾಗ್ಗೆ, ಪರಲೋಕ / ನಂಬಿಕೆ / ದೇವರ ಬಗೆಗಿನ ಮಾತುಕತೆ ನಡೆದಾಗಲೆಲ್ಲ ನಾವು ಇಂತಹ ನುಡಿಗಟ್ಟುಗಳನ್ನು ಕೇಳುತ್ತೇವೆ.


ಇಂತಹ ಹೇಳಿಕೆಗಳನ್ನು ನೀಡುವವರಿಗೆ ಬಹುಶಃ ದೇವರ ನಿಜವಾದ  ಪರಿಕಲ್ಪನೆಯು ಪ್ರಸ್ತುತವಾಗಿಲ್ಲ. ಯಾವುದೇ ನೈಸರ್ಗಿಕ ಅಥವಾ ಮಾನವ ನಿರ್ಮಿತ ವಸ್ತುವನ್ನು ದೇವರೆಂದು ಜನರು ನಂಬಿದಾಗ, ತಾರ್ಕಿಕ ಅಥವಾ ತರ್ಕಬದ್ಧ ವ್ಯಕ್ತಿಯು ದೇವರ ಕುರಿತಾದ ಈ ರೀತಿಯ ನಂಬಿಕೆ / ಪರಿಕಲ್ಪನೆಯನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ.


"ನಾನು ಮಾನವೀಯತೆಯನ್ನು ನಂಬುತ್ತೇನೆ."
 ಮಾನವೀಯತೆಯ ಅರ್ಥವೇನು?


 ಮಾನವೀಯ-ಅಮಾನವೀಯ ಮೌಲ್ಯಗಳನ್ನು ನಿರ್ಧರಿಸುವವರಾರು? ನೈತಿಕತೆ- ಅನೈತಿಕತೆಯ ನಿಯತಾಂಕಗಳನ್ನು ಸ್ಥಾಪಿಸುವವರಾರು?


 ಜನರ ಅಮೂಲ್ಯ ವಸ್ತುಗಳನ್ನು ದೋಚಿದ ದರೋಡೆಕೋರನು ತನಗೆ ಮತ್ತು ತನ್ನ ಕುಟುಂಬಕ್ಕೆ  ನೀತಿಬದ್ಧವಾಗಿ ಸಂಪಾದಿಸುತ್ತಿದ್ದೇನೆ ಎಂದು ಭಾವಿಸಿದರೆ ದರೋಡೆಗೆ ತುತ್ತಾದ ವ್ಯಕ್ತಿಯು ತನಗೆ ಅನ್ಯಾಯವಾಗಿದೆ ಎಂದು ಭಾವಿಸುತ್ತಾನೆ.


ಒಬ್ಬರಿಗೆ ನೈತಿಕವಾಗಿರುವುದು ಇನ್ನೊಬ್ಬರಿಗೆ ಅನೈತಿಕವಾಗಬಹುದು. ಎರಡೂ ಪಕ್ಷಗಳು ತಮ್ಮ-ತಮ್ಮ ಕಾರ್ಯಗಳನ್ನು ನ್ಯಾಯಸಮ್ಮತ ಮತ್ತು ಮಾನವೀಯವೆಂದು ಪರಿಗಣಿಸುತ್ತವೆ.


ಒಬ್ಬರಿಗೆ ಮಾನವೀಯವಾದದ್ದು ಇನ್ನೊಬ್ಬರಿಗೆ ಅಮಾನವೀಯವಾಗಿರಬಹುದು.ಒಂದು ಕ್ರಿಯೆಗೆ ಒಂದು ಪ್ರದೇಶದಲ್ಲಿ ಅನುಮತಿ ಸಿಕ್ಕಿದ್ದರೆ ಮತ್ತೊಂದು ಪ್ರದೇಶದಲ್ಲಿ ಅದೇ ಕ್ರಿಯೆ ಶಿಕ್ಷಾರ್ಹ ಅಪರಾಧವಾಗಿರಬಹುದು.

ಅಪರಾಧಿಗಳು, ಭೂ ಕಬಳಿಕೆದಾರರು, ಕೊಲೆಗಡುಕರು ತಮ್ಮ ಕಾರ್ಯಗಳನ್ನು ಸಮರ್ಥಿಸಬಹುದು, ಇಂತಹ ಜನರು ಅದನ್ನು ತಮ್ಮ ಉಳಿವಿಗಾಗಿ ಅಗತ್ಯವೆಂದು ಪರಿಗಣಿಸುತ್ತಾರೆ. ಬಲಿಪಶುವಾದ ಅವನು / ಅವಳು ಅನ್ಯಾಯಕ್ಕೊಳಗಾದ ಕಾರಣ ನ್ಯಾಯದ ಹುಡುಕಾಟ ನಡೆಸುತ್ತಾರೆ.


ಇಲ್ಲಿ ಪ್ರಶ್ನೆಯು ಸರಿ ಮತ್ತು ತಪ್ಪುಗಳ ನಡುವೆ ರೇಖೆಯನ್ನು ಎಳೆಯುವ ಅಧಿಕಾರದ ಬಗ್ಗೆ. ಮಾನವೀಯತೆ ಮತ್ತು ಅಮಾನವೀಯತೆಯ ನಡುವೆ ಗಡಿಗಳನ್ನು ನಿಗದಿಪಡಿಸುವ ಅಧಿಕಾರ ಯಾರಿಗಿದೆ ಎಂಬುದರ ಬಗ್ಗೆ?

 ಮಾನವೀಯತೆ- ಅಮಾನವೀಯತೆ, ನೈತಿಕತೆ -ಅನೈತಿಕತೆಯ ವ್ಯಾಖ್ಯಾನ ಉನ್ನತ ಅಧಿಕಾರ ಇರುವ ಮಾತ್ರವೇ ಸಾಧ್ಯವೆಂದು ಸಾಮಾನ್ಯ ಜ್ಞಾನ ಹೇಳುತ್ತದೆ. ನಿಷ್ಪಕ್ಷಪಾತ, ನ್ಯಾಯಸಮ್ಮತ ಮತ್ತು ಮಾನವ ದೌರ್ಬಲ್ಯಗಳಿಂದ ಮುಕ್ತನಾಗಿರುವ ಮಾತ್ರನೇ ಸಂಪೂರ್ಣ ನ್ಯಾಯವನ್ನು ಕೊಡಲು ಶಕ್ತನಾಗಿರುತ್ತಾನೆ.


ಆ ಪಾರಂಗತ ನ್ಯಾಯಾಧೀಶನೇ ನಮ್ಮ ಆ ಸೃಷ್ಟಿಕರ್ತ. ಮಾನವಕುಲಕ್ಕೆ ಯಾವುದು ಒಳ್ಳೆಯದು ಮತ್ತು  ಯಾವುದು ಕೆಟ್ಟದೆಂದು ಅವನಿಗೆ ತಿಳಿದಿದೆ. ಆ ಶೃಷ್ಟಿಕರ್ತನನ್ನು ನಾವು ಸರ್ವಶಕ್ತ ದೇವರು ಎಂದು ಕರೆಯುತ್ತೇವೆ. ಮನುಷ್ಯನಿಗೆ ನಿರ್ಧರಿಸುವ ಅಧಿಕಾರಿಯಾಗಲು ಸಾಧ್ಯವಿಲ್ಲ, ಅದೇ ರೀತಿ ಯಾವ ಮನುಷ್ಯನನಿಗೂ ಇನ್ನೋರ್ವ ವ್ಯಕ್ತಿಯ ಸಂದರ್ಭ, ಸಾಮರ್ಥ್ಯ, ಮಿತಿ ಇತ್ಯಾದಿಗಳನ್ನು ಸಂಪೂರ್ಣ ಅರಿತು  ತೀರ್ಪನ್ನು ನೀಡಲೂ ಸಾಧ್ಯವಿಲ್ಲ.


 ದೈವಿಕ ಪ್ರಸ್ತುತಿಗಳ ಮೂಲಕ ನೈತಿಕತೆಯ ನಿಯತಾಂಕಗಳನ್ನು ನಿಗದಿಪಡಿಸಿದವನು ಆ ಸರ್ವಶಕ್ತ ದೇವರು. ದೇವರೇ ನೈತಿಕತೆ / ಮಾನವೀಯ ಮೌಲ್ಯಗಳ ಅಂತಿಮ ಮೂಲ ಹಾಗೆಯೇ ಜೀವನದಲ್ಲಿ ಗೈದ ಕೆಲಸಗಳ ಜವಾಬ್ದಾರಿ ಇಲ್ಲದ ಹೊರತು ಈ ಮೌಲ್ಯಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಈ ವ್ಯವಸ್ಥೆ ಅವನು / ಅವಳು ಮಾಡುವ ಪ್ರತಿಯೊಂದು ಕಾರ್ಯಕ್ಕೆ  ಹೊಣೆಗಾರರನ್ನಾಗಿ ಮಾಡುತ್ತದೆ. ಈ ವ್ಯವಸ್ಥೆಯನ್ನು ನಾವು  ತದನಂತರದ /ಪರಲೋಕದ ನಂಬಿಕೆಯ ಜೀವನ ಎಂದು ಕರೆಯುತ್ತೇವೆ. ನ್ಯಾಯಪಾಲಕರಾಗಲಿ ಅನ್ಯಾಯಿಗಳಾಗಲಿ, ಮಾನವೀಯ ಮೌಲ್ಯ ಮೆರೆದವರಾಗಲಿ ಇಲ್ಲದವರಾಗಲಿ ಪ್ರತಿಯೊಬ್ಬರೂ ತಮ್ಮ-ತಮ್ಮ ಬಾಕಿಯನ್ನು ಪಡೆದೇ ತೀರುತ್ತಾರೆ.


ಮಾನವೀಯತೆಯ ಪರಿಕಲ್ಪನೆಯು ಎರಡು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ:

ದೇವರ ಮಾರ್ಗದರ್ಶನಕ್ಕೆ ಬದ್ಧರಾಗಿ, ಮಾಡಬೇಕಾದ ಮತ್ತು ಮಾಡಬಾರದ ಕಾರ್ಯಗಳನ್ನು ಅನುಸರಿಸುವುದು.

ತಮ್ಮ ಕಾರ್ಯಗಳಿಗೆ ಪರಲೋಕದಲ್ಲಿ ಜವಾಬ್ದಾರರಾಗಿರುವುದು.

ಹೊಣೆಗಾರಿಕೆಯ ಪರಿಕಲ್ಪನೆ ಇಲ್ಲದಿದ್ದರೆ, ತದನಂತರದ ಜೀವನದ ಪರಿಕಲ್ಪನೆ ಇಲ್ಲದಿದ್ದರೆ ಮಾನವೀಯತೆ / ನೈತಿಕತೆ / ನೀತಿಶಾಸ್ತ್ರದ ಅರ್ಥವಿಲ್ಲ.


ಬಿ. ಪರಲೋಕ ಜೀವನ: ಒಂದು ತಾರ್ಕಿಕ ಅವಶ್ಯಕತೆ


ಜೀವನದಲ್ಲಿ ಅತ್ಯಂತ ನಿಶ್ಚಿತ ವಿಷಯ: ಸಾವು

ಅತ್ಯಂತ ಅನಿಶ್ಚಿತ ವಿಷಯ: ಸಾವು ಬರುವ ಘಳಿಗೆ!


ಯುಧಿಷ್ಠಿರನು "ಯಾವುದು ಹೆಚ್ಚು ಆಶ್ಚರ್ಯಕರವಾಗಿದೆ"? ಎಂದು ಪ್ರಶ್ನಿಸಲ್ಪಟ್ಟಾಗ ಉತ್ತರಿಸಿದರು:

अहन्यहनि भूतानि गच्छन्ति यममन्दिरम् ।  शेषा जीवितुमिच्छन्ति किमाश्चर्यमतः परम् ॥


हर रोज़ कितने हि प्राणी यममंदिर जाते हैं (मर जाते हैं), वह देखने के बावजुद अन्य प्राणी जीने की इच्छा रखते हैं, इससे बडा आश्चर्य क्या हो सकता  है?

"ಪ್ರತಿದಿನ ಜನರು ಸಾಯುತ್ತಾರೆ ಮತ್ತು ದೇವರ ಬಳಿಗೆ ಹಿಂತಿರುಗುತ್ತಾರೆ, ಆದರೂ ಜನರು ಈ ಜಗತ್ತಿನಲ್ಲಿ ಬದುಕಲು ಬಯಸುತ್ತಾರೆ - ಇದು ಅತ್ಯಂತ ಆಶ್ಚರ್ಯಕರವಾಗಿದೆ".


ಆದರೆ, ಸಾವಿನ ನಂತರ ಏನಾಗುತ್ತದೆ?

ಜನರು ಪರಲೋಕದ ಜೀವನದ ಬಗ್ಗೆ ಅಥವಾ ಮರಣಾನಂತರದ ಜೀವನದ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ.


 ಶ್ರೀಮಾನ್  A 'ಅವಾಗಮ' ನದ ಪರಿಕಲ್ಪನೆಯನ್ನು ನಂಬುತ್ತಾನೆ (ವಿವಿಧ ರೂಪಗಳಲ್ಲಿ ಪದೇ ಪದೇ ಜನಿಸುವ). ನೀವು ಲಕ್ಷಾಂತರ ಬಾರಿ ಜೀವನ-ಮರಣದ ಚಕ್ರಕ್ಕೆ ಒಳಗಾಗುತ್ತೀರಿ.


ಶ್ರೀಮಾನ B ಪುನರುತ್ಥಾನದ ಪರಿಕಲ್ಪನೆ ಮತ್ತು ತೀರ್ಪಿನ ದಿನವನ್ನು ನಂಬುತ್ತಾರೆ (ಓರ್ವನ ಕಾರ್ಯಗಳಿಗೆ ಜವಾಬ್ದಾರರಾಗಿರುವುದು). ನೀವು ಅವಾಗಮನದ ಚಕ್ರಕ್ಕೆ ಒಳಗಾಗುವುದಿಲ್ಲ. ತೀರ್ಪಿನ ದಿನದಂದು ಸತ್ತ ನಿಮ್ಮನ್ನು ಎಬ್ಬಿಸಲಾಗುವುದು ಮತ್ತು ಜೀವನದಲ್ಲಾದ ಕಾರ್ಯಗಳಿಗೆ ನೀವೇ ಹೊಣೆಗಾರಿಕೆ  ವಹಿಸುವಿರಿ.


• ಶ್ರೀಮಾನ C ಅವರು ಸಾವಿನ ನಂತರ ಏನೂ ಆಗುವುದಿಲ್ಲ ಎಂದು ನಂಬುತ್ತಾರೆ. ಸಾವಿನ ನಂತರ ಮರುಜನ್ಮವಿಲ್ಲ. ಪರಲೋಕವೂ ಇಲ್ಲ.


# ಬಿಲಿಯನ್ ಡಾಲರ್ ಪ್ರಶ್ನೆ:

# ಒಂದೇ ಛಾವಣಿಯಡಿಯಲ್ಲಿ ವಾಸಿಸುವ ಮೂರು ರೀತಿಯ ಜನರು ತಮ್ಮ ಮರಣದ ನಂತರ ಮೂರು ವಿಭಿನ್ನ ವ್ಯವಸ್ಥೆಗಳನ್ನು ಅನುಭವಿಸುವ ಸಾಧ್ಯತೆಯಿದೆಯೇ?


# ಶ್ರೀಮಾನ್ A ಅವರು ಮರಣದ ನಂತರ ಪ್ರಾಣಿ / ಸಸ್ಯ / ಮನುಷ್ಯನ ರೂಪದಲ್ಲಿ ಜನ್ಮ ಪಡೆದರೆ ಶ್ರೀಮಾನ್ B ಮತ್ತು ಶ್ರೀಮಾನ್ C ಮರಣದ ನಂತರ ಜನ್ಮವೇ ತಾಳಲಿಲ್ಲ. ಈ ಸನ್ನಿವೇಶ ಸಾಧ್ಯವೇ?

ಖಂಡಿತ ಇಲ್ಲ!


ಸಾವಿನ ನಂತರ ಯಾವ ವ್ಯವಸ್ಥೆಯೇ ಅಸ್ತಿತ್ವದಲ್ಲಿರಲಿ- ಹಲವು ಮನುಷ್ಯರ ನಂಬಿಕೆಯ ಹೊರತಾಗಿಯೂ ಅದು ಪ್ರತಿಯೊಬ್ಬರಿಗೂ ಸಮಾನವಾಗಿರಬೇಕು. ಇದನ್ನು ನೀವು ಒಪ್ಪಿಕೊಳ್ಳುವಿರಾ?


ಪ್ರಕೃತಿಯ ನಿಯಮಗಳು ಎಲ್ಲರಿಗೂ ಒಂದೇ!


C. ತದನಂತರದ ಜೀವನ ಅಥವಾ ಪರಲೋಕಿಕ ಜೀವನ:


'ಆಖಿರತ್' ಒಂದು ವ್ಯವಸ್ಥೆಯಾಗಿದ್ದು, ತೀರ್ಪಿನ ದಿನದಂದು ಇಡೀ ಮಾನವಕುಲವು ಪುನರುತ್ಥಾನಗೊಳ್ಳುತ್ತದೆ ಮತ್ತು ಪ್ರತಿಯೊಬ್ಬರೂ ಅವನ / ಅವಳ ಜೀವನದಲ್ಲಾದ ಕಾರ್ಯಗಳಿಗೆ ಜವಾಬ್ದಾರರಾಗಿರುತ್ತಾರೆ.


ಹೊಣೆಗಾರಿಕೆ ಪ್ರಕೃತಿಯ ನಿಯಮ, ಸರಿಯೇ? ಸತ್ಕರ್ಮವಾಗಿರಲಿ ಅಥವಾ ದುಷ್ಕರ್ಮ್ಗಗಳಾಗಿರಲಿ,ನಿಮ್ಮ ಕರ್ಮದ ಬೆಲೆಯನ್ನು ನಿಮಗೆ ನೀಡಬೇಕು.


ತದನಂತರದ ಜೀವನ ಅಥವಾ ಪರಲೋಕಿಕ ಜೀವನದ ಮೂಲಕ ಪ್ರತಿಯೊಬ್ಬ ಮನುಷ್ಯನಿಗೂ ಸಂಪೂರ್ಣ ನ್ಯಾಯ ದೊರೆಯುತ್ತದೆ.


# ಸಂಪೂರ್ಣ ನ್ಯಾಯದ ಅವಶ್ಯಕತೆ
ಈ ಜಗತ್ತಿನಲ್ಲಿ,

ನಿಷ್ಠೆಯ  ಜೀವನವನ್ನು ನಡೆಸುವ ಅನೇಕ ಜನರಿದ್ದಾರೆ. ಅವರು ಇತರರೊಂದಿಗೆ ಒಳ್ಳೆಯ ರೀತಿಯಲ್ಲಿ ಬೆರೆಯುತ್ತಾರೆ, ದೇವರಿಗೆ ವಿಧೇಯರಾಗಿರುತ್ತಾರೆ, ದೇವರ ಆಜ್ಞೆಗಳನ್ನು ಪಾಲಿಸುತ್ತಾರೆ, ಕೆಟ್ಟ ಕಾರ್ಯಗಳಿಂದ ದೂರವಿರುತ್ತಾರೆ. ಆದರೆ ಕೆಲವೊಮ್ಮೆ ಈ ಜನರನ್ನು ಇತರರು ವಿವಿಧ ಸಮಸ್ಯೆಗಳಿಗೆ ಎಳೆದೊಯ್ಯುತ್ತಾರೆ, ತಮ್ಮ ಯಾವುದೇ ತಪ್ಪಿಲ್ಲದಿದ್ದರು ವಿನಾಕಾರಣ ನೋವು ಅಥವಾ ಶಿಕ್ಷಿಗೆ ಒಳಪಡುತ್ತಾರೆ. ಇಂತಹ ಒಳ್ಳೆಯ ಜನರು ತುಳಿತಕ್ಕೊಳಗಾಗುತ್ತಾರೆ, ಚಿತ್ರಹಿಂಸೆಗೊಳಗಾಗುತ್ತಾರೆ ಮತ್ತು ಅನೇಕ ಬಾರಿ ಈ ದುಃಖಮಯ ಜೀವನದಲ್ಲೇ ಸಾಯುವವರೆಗೂ ಬದುಕುತ್ತಾರೆ.


ಅಂತಹ ಒಳ್ಳೆಯ ಜನರಿಗೆ ನ್ಯಾಯ ಒದಗಿಸಲಾಗಿದೆ ಎಂದು ನೀವು ಭಾವಿಸುತ್ತೀರಾ?

ಅಂತೆಯೇ, ಯಾವಾಗಲೂ ಇತರರನ್ನು ನೋಯಿಸುವ ಅಥವಾ ಮೋಸ ಮಾಡುವ ಮತ್ತು ಜನರನ್ನು ಅವಮಾನಿಸುವ ಅನೇಕ ಜನರಿದ್ದಾರೆ ಎಂದು ನಾವು ನೋಡುತ್ತೇವೆ. ಆದರೆ ನ್ಯಾಯ ವ್ಯವಸ್ಥೆಯಲ್ಲಿ ಅವರ ಹೆಚ್ಚಿನ ಪ್ರಭಾವ ಅಥವಾ ಸಂಪರ್ಕದಿಂದಾಗಿ ಅವರಿಗೆ ಶಿಕ್ಷೆಯಾಗುವುದಿಲ್ಲ. ಅವರು ದುಷ್ಕೃತ್ಯಗಳಲ್ಲಿ ಪಾಲ್ಗೊಂಡಿದ್ದರೂ ಸಹ ಅವರಿಗೆ  ಶಿಕ್ಷೆಯಾಗುವುದಿಲ್ಲ, ಅವರು ಸಾಯುವವರೆಗೂ ಬಹಳ ಆರಾಮದಾಯಕ ಜೀವನವನ್ನು ನಡೆಸುತ್ತಾರೆ. ಈ ಲೌಕಿಕ ನ್ಯಾಯ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ಎಲ್ಲಾ ಕೊಲೆಗಾರರು, ಅತ್ಯಾಚಾರಿಗಳು, ದರೋಡೆಕೋರರು, ಅಪರಾಧಿಗಳಿಗೆ ಶಿಕ್ಷೆಯಾಗುವುದಿಲ್ಲ.


ಈ ಕೆಟ್ಟ ಜನರ ದುಷ್ಕರ್ಮಗಳಿಗೆ ತಕ್ಕ ಶಿಕ್ಷೆಯಾಗಿದೆಯೇ?

ಜಗತ್ತಿನಲ್ಲಿ ಸಾಕಷ್ಟು ಅನ್ಯಾಯಗಳು ನಡೆಯುತ್ತಿವೆ. ಅನೇಕ ಬಾರಿ, ವ್ಯವಸ್ಥೆಯು ಪ್ರತಿಯೊಬ್ಬರಿಗೂ ನ್ಯಾಯಯುತವಾಗಿರುವುದಿಲ್ಲ. "ಬಲ ಉಳ್ಳವನೇ ಸರಿ" ಎಂಬುವುದು ಮೇಲೆ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತದೆ.

ಇಂತಹ ವ್ಯವಸ್ಥೆಯೇ ಕಥೆಯ ಅಂತ್ಯವಾಗಬಹುದೇ? ಒಳ್ಳೆಯ ಮತ್ತು ಕೆಟ್ಟ ಜನರಿಗೆ ನೀಡಬೇಕಾದ ಸಂಪೂರ್ಣ ನ್ಯಾಯ ಇನ್ನೂ ಬಾಕಿ ಇದೆ.


ಪ್ರತಿಯೊಬ್ಬ ವ್ಯಕ್ತಿಗೂ ಅವನ / ಅವಳ ಕರ್ಮಗಳಿಗೆ ಅನುಗುಣವಾಗಿ ನ್ಯಾಯ ಒದಗಿಸುವ ವ್ಯವಸ್ಥೆ ಇರಬೇಕು ಎಂದು ಸಾಮಾನ್ಯ ಜ್ಞಾನ ಹೇಳುತ್ತದೆ.


#  ಪರಲೋಕದ ಜೀವನ ಅಥವಾ ಮರಣಾನಂತರದ ಜೀವನ.


ಈ ನ್ಯಾಯ ವ್ಯವಸ್ಥೆಯು ಈ ರೂಪದಲ್ಲಿರುತ್ತದೆ:

ಪುನರುತ್ಥಾನ - ತೀರ್ಪಿನ ದಿನದಂದು ಎರಡನೇ ಜೀವನವನ್ನು ಪಡೆಯುವುದು.

ಸ್ವರ್ಗ - ಸತ್ಕರ್ಮಿಗೆ ಬಹುಮಾನಿತ ಸ್ಥಳ - ಉದಾತ್ತ ಆತ್ಮಗಳು.

ನರಕ - ದುರಾಚಾರಿ, ಅಧರ್ಮಿ ಮತ್ತು ದುಷ್ಟ ಜನರಿಗೆ ಶಿಕ್ಷೆಯ ಸ್ಥಳ.

ಪರಲೋಕ ಜೀವನದಲ್ಲಿ ಯಾರು ನ್ಯಾಯ ಮಾಡುತ್ತಾರೆ? ಉತ್ತರ: ನಮ್ಮ ಸೃಷ್ಟಿಕರ್ತ.


ಸಾವಿನ ನಂತರ ಮಾನವಕುಲವನ್ನು ಅವರ ಹೊಣೆಗಾರಿಕೆಯ ಕುರಿತು ಪ್ರಶ್ನಿಸಲಾಗುವುದಿಲ್ಲವೆಂದರೆ ಏನು?

ಇಡೀ ಪ್ರಪಂಚವೇ ಅವ್ಯವಸ್ಥೆ ಮತ್ತು ಕೊಳಕು ಕಾರ್ಯಗಳ ಗೂಡಗುತ್ತದೆ. ಅವನ / ಅವಳ ಕಾರ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಕೇವಲ ಈ ಲೌಕಿಕ ವ್ಯವಸ್ಥೆಯಲ್ಲಿ ಶಿಕ್ಷೆಯಾಗುವುದನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ.


ಪರಲೋಕದ ಜೀವನ ಅಥವಾ ಪರಲೋಕವಿಲ್ಲದೆ ಮಾನವೀಯತೆಯ ಪರಿಕಲ್ಪನೆಯೂ ಇಲ್ಲ.


********************

No comments:

Post a Comment

ಪ್ರವಾದಿ ಯೂನಸರ ಕಥೆಯಿಂದ 4 ಪಾಠಗಳು

 ಪ್ರವಾದಿ ಯೂನಸರ ಕಥೆಯಿಂದ 4 ಪಾಠಗಳು 1. ನಮ್ಮ ಪಾಪವನ್ನು ಗುರುತಿಸಿ ಕ್ಷಮೆ ಹುಡುಕುವುದು. ಮೀನು ಸಮುದ್ರದ ಆಳಕ್ಕೆ ಇಳಿದಾಗ ಪ್ರವಾದಿ ಯೂನಸ್ ತನ್ನ ತಪ್ಪನ್ನು ಅರಿತುಕೊಂಡ...