Friday 31 July 2020

ನಾವು ದೇವರನ್ನು ಪ್ರೀತಿಸಬೇಕೇ ಅಥವಾ ದೇವರಿಗೆ ಭಯಪಡಬೇಕೇ?

ನಾವು ದೇವರನ್ನು ಪ್ರೀತಿಸಬೇಕೇ ಅಥವಾ ದೇವರಿಗೆ ಭಯಪಡಬೇಕೇ?

ಪ್ರಶ್ನೆ: ನಾವು ದೇವರನ್ನು ಪ್ರೀತಿಸಬೇಕೋ ಅಥವಾ ದೇವರಿಗೆ ಭಯಪಡಬೇಕೋ? ಭಯವು ದೇವರ ವಿಧೇಯತೆಯತ್ತ ಮೊದಲ ಹೆಜ್ಜೆ ಎಂದು ನಾನು ನಂಬುತ್ತೇನೆ.

***************

ಉತ್ತರ: ಅರೇಬಿಕ್ ಪದ "ತಖ್ವಾ" ಅನ್ನು ಸಾಮಾನ್ಯವಾಗಿ "ಭಯ" ಎಂದು ತಪ್ಪಾಗಿ ಅನುವಾದಿಸಲಾಗುತ್ತದೆ. "ವಾವ್ ಕಾಫ್ ಯಾ" ಎಂಬ ಮೂಲ ಪದವು ಪ್ರೀತಿಯನ್ನು ಸೂಚಿಸುತ್ತದೆ. ನಾವು ಪ್ರಾಣಿ, ಭೂತ ಅಥವಾ ದುಷ್ಟ ಜನರಿಗೆ ಭಯಪಡುವ ಹಾಗೆ ದೇವರಿಗೆ ಭಯಪಡುವುದಾಗೇನಲ್ಲ. ದೇವರನ್ನು  ಪ್ರೀತಿಸುವುದಾಗಿದೆ.

ಓರ್ವನ ಮೇಲಿನ ಪ್ರೀತಿ ಅಪಾರವಾಗಿ ಬೆಳೆದಾಗ ಭಯವು ಬೆಳೆಯುತ್ತದೆ, ಆದರೆ ಈ ಭಯವು ಯಾವ ಭಯಾನಕ ಅಂಶಗಳಿಂದಲ್ಲ ಆದರೆ ವಿಪರೀತ ಪ್ರೀತಿಯಿಂದಾಗಿ. ಈ ಭಯವು ನೀವು ಪ್ರೀತಿಸುವವನಿಗೆ ಅವಿಧೇಯರಾಗುವುದನ್ನು ತಡೆಯುತ್ತದೆ. ಈ ಪ್ರೀತಿ / ಭಯದ ಭಾವನೆಯನ್ನು ತಖ್ವಾ ಎಂದು ಕರೆಯಲಾಗುತ್ತದೆ, ಇದನ್ನು ಖುರಾನ್ ಶಿಫಾರಸು ಮಾಡುತ್ತದೆ.

"... ವಿಶ್ವಾಸಿಗಳಾಗಿರುವವರು --ಅಲ್ಲಾಹನನ್ನು ಅಪಾರವಾಗಿ ಪ್ರೀತಿಸುತ್ತಾರೆ ..." ಕುರಾನ್ 2: 165

ಭಕ್ತರು ಅಲ್ಲಾಹನನ್ನು ಅತಿಯಾಗಿ ನೆನಪಿಸಿಕೊಳ್ಳುತ್ತಾರೆ ಎಂದು ಕುರಾನ್ ಹೇಳುತ್ತದೆ.

ಅದೇ ಘಳಿಗೆಯಲ್ಲಿ  ಖುರಾನ್ ವಿಶ್ವಾಸಿಗಳನ್ನು "ಅಲ್ಲಾಹನ ಭಯ" ಎಂದು ಸಾಮಾನ್ಯವಾಗಿ ಅನುವಾದಿಸಲ್ಪಡುವ  ಅಂಶವನ್ನು ಉಳ್ಳವರಾಗಿರುವಂತೆ ಒತ್ತಾಯಿಸುತ್ತದೆ. ದಯವಿಟ್ಟು ಗಮನದಲ್ಲಿಡಿ ಭಿನ್ನ ಅರೇಬಿಕ್ ಪದಗಳು ವಿಭಿನ್ನ ಅರ್ಥಗಳನ್ನು ಕೊಡುತ್ತವೆ, ಆದರೆ ನಾವು ಸಾಮಾನ್ಯವಾಗಿ ಒಂದೇ ಪದ "ಭಯ" ಎಂದು ಅನುವಾದಿಸುತ್ತೇವೆ.

ಹಾಗಾದರೆ - ಅಲ್ಲಾಹನ "ವಿಪರೀತ ಪ್ರೀತಿ" ಮತ್ತು ಅಲ್ಲಾಹನಿಗೆ "ಭಯಭೀತ"ರಾಗಿರುವುದರ ನಡುವೆ ಹೊಂದಾಣಿಕೆ ಮಾಡುವುದು ಹೇಗೆ?
ಈ "ಅಲ್ಲಾಹನ ಕುರಿತಾದ ಭಯ"ವು ನೀವು ಪ್ರಾಣಿ, ಭೂತ, ಬೆಂಕಿ,ನೀರಿನಲ್ಲಿ ಮುಳುಗುವ ಇತ್ಯಾದಿಗಳ ಬಗ್ಗೆ ಹೊಂದಿರುವ ಭಯವಲ್ಲ. ಅಲ್ಲಾಹನ "ಭಯ"ವು ಅಲ್ಲಾಹನ ಮೇಲಿನ ಅತಿಯಾದ ಪ್ರೀತಿಯ ಪರಿಣಾಮವಾಗಿದೆ. ನೀವು ಅಲ್ಲಾಹನನ್ನು ಅತಿಯಾಗಿ ಪ್ರೀತಿಸುವಾಗ ಒಂದು ರೀತಿಯ "ಭಯ" ಬೆಳೆಯುತ್ತದೆ. ಅಲ್ಲಾಹನನ್ನು ಅಸಮಾಧಾನಗೊಳಿಸಲು/ಅಸಂತೋಷಗೊಳಿಸಲು ನಿಮಗೆ ಕಷ್ಟವಾಗುತ್ತದೆ, ಆ  ರೀತಿಯ ಭಯವನ್ನೇ  ಇಸ್ಲಾಂನಲ್ಲಿ ನಿರೀಕ್ಷಿಸವಾಗಿದೆ.

ಅಲ್ಲಾಹನ ಮೇಲಿರುವ ಅಪಾರ ಪ್ರೀತಿಯ ಸಲುವಾಗಿ ನೀವು ಅಲ್ಲಾಹನನ್ನು "ಭಯಪಡಬೇಕು".

"ಭಯ ಆಧಾರಿತ ವಿಧೇಯತೆ"ಯ ತತ್ವಶಾಸ್ತ್ರಕ್ಕೆ ಖುರಾನ್ ಬದ್ಧವಾಗಿಲ್ಲ. ಖುರಾನಿನ ವಿಧಾನ ಹಂತವಾರು: 

1. ದೇವರ ಚಿಹ್ನೆ/ಸೂಚಿ ಗಳನ್ನು ಗುರುತಿಸಿವುದು.
2. ಎಲ್ಲೆಡೆ ಪ್ರಸ್ತುತವಾಗಿರುವ ದೇವರ ಚಿಹ್ನೆ/ಸೂಚಿಗಳ ಬಗ್ಗೆ ವಿಚಾರ-ವಿಮರ್ಶೆ ಮಾಡುವುದು.
3. ಯಾರಿಗಾದರು ದೇವರ ಚಿಹ್ನೆ/ಸೂಚಿಗಳು ಮನವರಿಕೆಯಾಗಿದ್ದು ತನ್ನ ನೈಜ ಸೃಷ್ಟಿಕರ್ತನನ್ನು ನಂಬಲು ಆರಂಭಿಸಿದ್ದರೆ ಅವನು / ಅವಳು ದೇವರ ಮೇಲೆ ದೃಢ ವಿಶ್ವಾಸವನ್ನು ಹೊಂದಬೇಕು.
4. ದೇವರ ಮೇಲಿನ ನಂಬಿಕೆಯು ದೇವರ ಕಾನೂನುಗಳನ್ನು ನಂಬುವುದನ್ನು ಒಳಗೊಂಡಿದೆ. ಈ ಕಾನೂನುಗಳ ಜೊತೆ ನಾವು  ಪ್ರತಿನಿತ್ಯದ ಜೀವನದಲ್ಲಿ ವ್ಯವಹರಿಸುತ್ತಲೇ ಇರುತ್ತೇವೆ. ಖುರಾನ್ ಮತ್ತು ಸುತ್ತಮುತ್ತಲಿನ ವಾತಾವರಣ ದೇವರ ಈ ನಿಯಮಗಳ ಜ್ಞಾನವನ್ನು ಒದಗಿಸುತ್ತವೆ.
5. ಮುಂದೆ ಹೆಜ್ಜೆಯೇ ಕಾಯಕ/ಕಾರ್ಯ. ಕಾಯಕವು ದೇವರ ಮೇಲಿನ ನಂಬಿಕೆ ಮತ್ತು ಪ್ರೀತಿಯ ಮೇಲೆ ಅವಲಂಬಿತವಾಗಿರುತ್ತದೆ.ಒಬ್ಬ ವಿಶ್ವಾಸಿಯು ದೇವರನ್ನು ಎಷ್ಟು ಪ್ರೀತಿಸುತ್ತಾನೆಯೋ ಅಷ್ಟೇ ಅವನು / ಅವಳು ದೇವರ ಆಜ್ಞೆಗಳನ್ನು ಪಾಲಿಸುವನು/ಳು.
6. ಪ್ರೀತಿಯ ವಿಪರೀತ ರೂಪವು ಒಂದು ರೀತಿಯ ಭಯವನ್ನು ಉಂಟುಮಾಡುತ್ತದೆ. ಒಬ್ಬ ವಿಶ್ವಾಸಿಯು ದೇವರ ಆಜ್ಞೆ  ಮೀರುವ ಭಯದದಿಂದ ಪಾಪಗಳಿಂದ ದೂರವಿರಬೇಕು.

ಸಂಕ್ಷಿಪ್ತವಾಗಿ ಹೇಳುವುದಾದರೆ - ತಾರ್ಕಿಕತೆ(reasoning), ಪ್ರೀತಿ(love) ಮತ್ತು ಸಲ್ಲಿಕೆಯ(submission) ಆಧಾರಿತ, ನಿರ್ಣಯ ಭರಿತ ನಂಬಿಕೆಯನ್ನು ಖುರಾನ್ ಆದೇಶಿಸುತ್ತದೆ.

*******************

No comments:

Post a Comment

ಪ್ರವಾದಿ ಯೂನಸರ ಕಥೆಯಿಂದ 4 ಪಾಠಗಳು

 ಪ್ರವಾದಿ ಯೂನಸರ ಕಥೆಯಿಂದ 4 ಪಾಠಗಳು 1. ನಮ್ಮ ಪಾಪವನ್ನು ಗುರುತಿಸಿ ಕ್ಷಮೆ ಹುಡುಕುವುದು. ಮೀನು ಸಮುದ್ರದ ಆಳಕ್ಕೆ ಇಳಿದಾಗ ಪ್ರವಾದಿ ಯೂನಸ್ ತನ್ನ ತಪ್ಪನ್ನು ಅರಿತುಕೊಂಡ...